ನಮ್ಮ ಪರಿಚಯ
ಗ್ರಾಹಕರ ಪರಿಣಾಮಕಾರಿ ಸಂಪರ್ಕಕ್ಕೆ ಉತ್ತೇಜನಕಾರಿ ಸಂವಹನ ಸಾಧನಗಳು
ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ (ಕೆಎಸ್‌ಎಂಸಿಎ), ಈ ಸಂಸ್ಥೆಯು ಮಾರ್ಕೆಟಿಂಗ್ ಕನ್ಸಲ್ಟೆಂಟ್ಸ್ ಅಂಡ್ ಏಜೆನ್ಸೀಸ್ ಎಂಬ ಹೆಸರಿನಲ್ಲಿ ೧೯೭೨ ರಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಶ್ರಯದಲ್ಲಿ ಮೈಸೂರ್ ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಸಹಾಯಕ ಸಂಸ್ಥೆಯಾಗಿ ಸ್ಥಾಪನೆಯಾಗಿದೆ. ಕಂಪನಿಯು ಪ್ರಾರಂಭದಲ್ಲಿ ಕೆಲವೇ ಗ್ರಾಹಕರ ಬೆಂಬಲದೊಡನೆ ಪ್ರಗತಿದಾಯಕವಾಗಿ ಬೆಳೆಯುವುದರ ಜೊತೆಗೆ ತನ್ನ ಗ್ರಾಹಕರುಗಳಾದ ರಾಜ್ಯ ಸರ್ಕಾರದ ವಿವಿಧ ಇಲಾಖೆ, ಮಂಡಳಿ, ನಿಗಮ, ಮಹಾಮಂಡಳಿ, ಪಿಎಸ್‌ಯು ಮತ್ತು ಕೇಂದ್ರ ಸರ್ಕಾರದ ಕೆಲವು ಉದ್ಯಮಗಳ ಜಾಹೀರಾತು ಪ್ರಕಟಣೆ, ಕಾರ್ಯಕ್ರಮ ಆಯೋಜನೆ, ಹೊರಾಂಗಣ, ರೇಡಿಯೊ ಮತ್ತು ಟಿವಿ ಜಾಹೀರಾತುಗಳು, ಮುದ್ರಣ ಸೇವೆಗಳು ಹಾಗೂ ಸಾಮಾಜಿಕ ಮಾಧ್ಯಮ ವಿಷಯ ಒಕ್ಕಣೆಯ ಸೇವೆಗಳು ಸೇರಿದಂತೆ ಸಮಗ್ರವಾದ ಸಂಪರ್ಕ ಸಂವಹನ ಕಾರ್ಯಗಳನ್ನು ಒದಗಿಸುತ್ತಿದೆ. ಅಬಕಾರಿ ಭದ್ರತಾ ಚೀಟಿಗಳ ಮುದ್ರಣ ಮತ್ತು ನಿರ್ವಹಣೆ ಸೇವೆಯನ್ನು ೩೩ ವರ್ಷಗಳ ದೀರ್ಘಾವಧಿಯವರೆಗೆ ಸಮರ್ಥವಾಗಿ ಮತ್ತು ಪಾರದರ್ಶಕವಾಗಿ ಒದಗಿಸಿದೆ.
ಕೆಎಸ್‌ಎಂಸಿಎ ಸಂಸ್ಥೆಯು ಐದು ದಶಕಗಳಿಂದ ತನ್ನ ಗ್ರಾಹಕರುಗಳಿಗೆ ಅವರ ಗುರಿಗಳನ್ನು ಸಾಧಿಸಲು ಸ್ಫೂರ್ತಿದಾಯಕ, ಸ್ಮರಣಾರ್ಹ ಮತ್ತು ಪರಿಣಾಮಕಾರಿ ಸಂಪರ್ಕ ಸಂವಹನ ಉಪಾಯಗಳ ಮೂಲಕ ಬೆಂಬಲ ನೀಡಲು ಶ್ರಮಿಸುತ್ತಿದೆ. ಕಂಪನಿಯು ತನ್ನ ದಕ್ಷ ಮತ್ತು ಶ್ರೇಷ್ಠ ಸಾಧನೆಗಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನವಾಗಿದೆ. ೨೦೧೧-೧೨ ಮತ್ತು ೨೦೨೦-೨೧ರ ಸಾಲಿನಲ್ಲಿ ಶ್ರೇಷ್ಠ ಕಾರ್ಯಕ್ಷಮತೆಗಾಗಿ ಮುಖ್ಯಮಂತ್ರಿಯವರ ರತ್ನ ಪ್ರಶಸ್ತಿ ಪಡೆದಿರುವುದು ಅದರ ಪ್ರತಿಭೆಗೆ ನಿದರ್ಶನವಾಗಿದೆ.
ಪ್ರಶಸ್ತಿಗಳು ಮತ್ತು ಮನ್ನಣೆ
ಉತ್ತಮ ಕಾರ್ಯಕ್ಷಮತೆಗಾಗಿ ಸಿಎಂ ರತ್ನ ಪ್ರಶಸ್ತಿ
2011-12 ಮತ್ತು 2020-21
ರಾಷ್ಷ್ರ ಮಟ್ಟದ ಸ್ಪರ್ಧೆಯಲ್ಲಿ ಕೆಎಸ್‌ಎಂಸಿಎ ಗೆದ್ದಿರುವ ಸೃಜನಶೀಲ ಲಾಂಛನ
ನಿರ್ದೇಶಕರ ಮಂಡಳಿ
ಶ್ರೀ ಸತೀಶ ಕೃಷ್ಣ ಸೈಲ್
ಶಾಸಕರು, ಕಾರವಾರ ಕ್ಷೇತ್ರ ಹಾಗೂ
ಅಧ್ಯಕ್ಷರು, ಕೆಎಸ್‌ಎಂಸಿಎ ಲಿಮಿಟೆಡ್
ಶ್ರೀ ಮೊಹಮ್ಮದ್ ಅತೀಕುಲ್ಲಾ ಶರೀಫ್
ವ್ಯವಸ್ಥಾಪಕ ನಿರ್ದೇಶಕರು
ಕೆಎಸ್‌ಎಂಸಿಎ ಲಿಮಿಟೆಡ್
ಶ್ರೀ ಮನೋಜ್ ಕುಮಾರ್, ಭಾ.ಅ.ಸೇ.,
ವ್ಯವಸ್ಥಾಪಕ ನಿರ್ದೇಶಕರು - ಎಂಎಸ್‍ಐಎಲ್ ಮತ್ತು
ನಿರ್ದೇಶಕರು, ಕೆಎಸ್‌ಎಂಸಿಎ ಲಿಮಿಟೆಡ್
ಶ್ರೀ ಆರ್. ರಮೇಶ್
ನಿರ್ದೇಶಕರು (ತಾಂತ್ರಿಕ ಕೋಶ), ಸಿ&ಐ ಇಲಾಖೆ ಮತ್ತು
ನಿರ್ದೇಶಕರು, ಕೆಎಸ್‌ಎಂಸಿಎ ಲಿಮಿಟೆಡ್
ಶ್ರೀ ಡಿ.ಪಿ. ಪ್ರಕಾಶ್
ಕಾರ್ಯನಿರ್ವಾಹಕ ನಿರ್ದೇಶಕರು, ಕೆಎಸ್‍ಐಐಡಿಸಿ ಮತ್ತು
ನಿರ್ದೇಶಕರು, ಕೆಎಸ್‌ಎಂಸಿಎ ಲಿಮಿಟೆಡ್
ಶ್ರೀ ಅರುಳ್ ಕುಮಾರ್, ಕ.ಆ.ಸೇ.,
ಅಪರ ಕಾರ್ಯದರ್ಶಿ (ಆಡಳಿತ ಮತ್ತು ಸಮನ್ವಯ), ಆರ್ಥಿಕ ಇಲಾಖೆ ಮತ್ತು ನಿರ್ದೇಶಕರು, ಕೆಎಸ್‌ಎಂಸಿಎ ಲಿಮಿಟೆಡ್
ಶ್ರೀ ಎ. ಎಂ. ಚಂದ್ರಪ್ಪ
ಮುಖ್ಯ ಪ್ರಧಾನ ವ್ಯವಸ್ಥಾಪಕರು - ಎಂಎಸ್‍ಐಎಲ್ ಮತ್ತು
ನಿರ್ದೇಶಕರು, ಕೆಎಸ್‌ಎಂಸಿಎ ಲಿಮಿಟೆಡ್
ಶ್ರೀಮತಿ ಶ್ರೀದೇವಿ ಬಿ. ಎನ್
ಕಂಪನಿ ಕಾರ್ಯದರ್ಶಿ, ಎಂಎಸ್‍ಐಎಲ್ ಮತ್ತು
ನಿರ್ದೇಶಕರು, ಕೆಎಸ್‌ಎಂಸಿಎ ಲಿಮಿಟೆಡ್
ಶ್ರೀ ರಮಾಕಾಂತ್ ಹೆಬ್ಬಳ್ಳಿ
ಮುಖ್ಯ ಪ್ರಧಾನ ವ್ಯವಸ್ಥಾಪಕರು - ಎಂಎಸ್‍ಐಎಲ್ ಮತ್ತು ನಿರ್ದೇಶಕರು
ಕೆಎಸ್‌ಎಂಸಿಎ ಲಿಮಿಟೆಡ್
ಶ್ರೀ ಮೊಹಮ್ಮದ್ ಅತೀಕುಲ್ಲಾ ಶರೀಫ್
ವ್ಯವಸ್ಥಾಪಕ ನಿರ್ದೇಶಕರು
ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್
ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್
ನಿಮ್ಮ ಯಶಸ್ಸು ನಿಮ್ಮ ಗ್ರಾಹಕರ ಯಶಸ್ಸಿನ ಮೇಲೆ ನಿಂತಿದೆ
ಜನನಿಬಿಡ ಮಾರುಕಟ್ಟೆಯಲ್ಲಿ ನಿಗದಿತ ಸಮಯ ಮತ್ತು ಸಂದರ್ಭದಲ್ಲಿ ಗಮನ ಸೆಳೆಯಲು ಎಲ್ಲರೂ ಪ್ರಯತ್ನಿಸುವರಾದರು, ನೀವು ಒಂದು ಹೆಜ್ಜೆ ಮುಂದೆ ಹೋಗಲು ಪ್ರಯತ್ನಿಸಬೇಕು. ತಂತ್ರಜ್ಞಾನವು ಜೀವನವನ್ನು ಸರಳ ಮತ್ತು ಸುಲಭಗೊಳಿಸಲು ಇರುವ ಒಂದು ಸಾಧನ. ಇದು ಜೀವನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಾಧನವೂ ಆಗಿದೆ.
ಬದಲಾವಣೆಯು ನಿರಂತರ ಪ್ರಕ್ರಿಯೆ ಮತ್ತು ಮುನ್ನಡೆಗೆ ಅಳವಡಿಸಿಕೊಳ್ಳಬೇಕಾದ ನೀತಿ. ಬದಲಾವಣೆಯನ್ನು ನಮ್ಮ ಅನುಕೂಲಕ್ಕೆ ಬಳಕೆ ಮಾಡಿಕೊಳ್ಳಲು ಧೈರ್ಯ ಇರಬೇಕು ಮತ್ತು ಯಾವುದೇ ವ್ಯತಿರಿಕ್ತ ಪರಿಣಾಮವನ್ನು ತಡೆಯುವಲ್ಲಿ ಉಂಟಾಗಬಹುದಾದ ಅಪಾಯಗಳ ವಿಶ್ಲೇಷಣೆ ಮಾಡಬೇಕು. ಈ ನಿಟ್ಟಿನಲ್ಲಿ ಕಂಪನಿಯು ಗ್ರಾಹಕರಿಗೆ ಸಮಗ್ರ ಸೇವಾನುಭವದ ಪರಿಣತಿಯ ಲಾಭವನ್ನು ಒದಗಿಸಲು ಸಮಕಾಲೀನ ಶೈಲಿಯ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು.
ಕೆಎಸ್‌ಎಂಸಿಎಯು ಯಾವುದೇ ವ್ಯವಸ್ಥೆಯನ್ನು ರೂಪಿಸಲು ಮತ್ತು ಅದನ್ನು ಕಾರ್ಯಗತಗೊಳಿಸಲು ನಿರ್ಧರಿಸಿದ ಸಂದರ್ಭದಲ್ಲಿ ಅದು ಗ್ರಾಹಕ ಸ್ನೇಹಿಯೆ ಎಂಬುದರ ಬಗ್ಗೆ ಮನದಟ್ಟು ಮಾಡಿಕೊಂಡು ಮುಂದೆ ಹೋಗುತ್ತದೆ. ಏಕೆಂದರೆ ಇಲ್ಲಿ ಗ್ರಾಹಕರೇ ನಮಗೆ ಪ್ರಮುಕ ಸಂಪನ್ಮೂಲ. ಗ್ರಾಹಕರಿಗೆ ಉತ್ತೇಜನಕಾರಿ, ಸ್ಮರಣೀಯ ಮತ್ತು ಪರಿಣಾಮಕಾರಿ ಸಂಪರ್ಕ ಸೌಲಭ್ಯ ಒದಗಿಸಲು ಬಹು ಎಚ್ಚರಿಕೆಯಿಂದ ಯೋಜನೆ ರೂಪಿಸುವುದು, ಮಾರುಕಟ್ಟೆಯನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳುವುದರ ಜೊತೆಗೆ ಸೂಕ್ತವಾದ ತಂತ್ರಜ್ಞಾನವನ್ನು ಬಳಸುತ್ತಿದೆ.
ಕಂಪನಿಯು ಪ್ರತಿಭಾವಂತ ವೃತ್ತಿ ಪರಿಣಿತರ ತಂಡವನ್ನು ಹೊಂದಿರುವುದು. ಇದರಿಂದ ಅಸಂಖ್ಯಾತ ಸವಾಲುಗಳ ಬಗ್ಗೆ ಕಾರ್ಯನಿರ್ವಹಣೆ ಮಾಡುವುದು ಮತ್ತು ನಮ್ಮ ಗ್ರಾಹಕರ ಸಂಪೂರ್ಣ ತೃಪ್ತಿಗೆ ಅನುಗುಣವಾಗಿ ಸೇವೆಯನ್ನು ಒದಗಿಸುವುದು ಹರ್ಷದಾಯಕವಾಗಿದೆ.ಗ್ರಾಹಕರ ಬೇಡಿಕೆಗಳನ್ನು ನಾವು ಅರ್ಥಮಾಡಿಕೊಳ್ಳುವುದು ಮತ್ತು ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಪರಿಣಾಮಕಾರಿ ವ್ಯವಸ್ಥೆಯನ್ನು ರೂಪಿಸುವುದರಲ್ಲಿ ನಮ್ಮ ಯಶಸ್ಸಿನ ಬಹುಪಾಲು ಅಂಶ ಅಡಗಿದೆ.
ಸಂಪರ್ಕಿಸಿ
ವಿಳಾಸ
ಎಮ್ ಸಿ & ಎ ಹೌಸ್ ನಂ. 42
ಮಿಲ್ಲರ್ಸ್ ರಸ್ತೆ
ಬೆಂಗಳೂರು - 560 052
ಈಮೇಲ್
ದೂರವಾಣಿ
080 2225 6287
ಸಾಮಾಜಿಕ ಮಾಧ್ಯಮ